ತಾತನ ಕಾಲದ ಮರದ ಕುರ್ಚಿ, ಒರಗುವ ಕುರ್ಚಿ, ತೂಗಾಡುವ ಕುರ್ಚಿ, ಬೆತ್ತದ ಕುರ್ಚಿ, ವಾಲುವ ಕುರ್ಚಿ ಮುಂತಾದುವುಗಳನ್ನೂ ಇತ್ತೀಚಿಗಿನ ವಿವಿಧ 'ಡಿಸೈನೆರ್ ಕುರ್ಚಿ' ಗಳನ್ನೂ ನೋಡಿ ಗೊತ್ತಿತ್ತು. ಕಳೆದ ವಾರ ಚೈನಾದ ಭಾಗವಾಗಿರುವ ಮಕಾವ್ ನಲ್ಲಿ ನಾನು ಗಮನಿಸಿದ ಕುರ್ಚಿಗಳು ಹೀಗಿದ್ದುವು:
ಶಾಪಿಂಗ್ ಮಾಲ್ ಒಂದರಲ್ಲಿ ಅಲ್ಲಲ್ಲಿ 'ದೊಡ್ಡದಾದ ಹೂ ಕುಂಡ'ವನ್ನು ಜೋಡಿಸಿದ್ದರು. ಶಾಪಿಂಗ್ ಮಧ್ಯ ವಿರಾಮ ಬೇಕಾದರೆ, ಜನ ಇದನ್ನು ಕೂರಲು ಕಟ್ಟೆಯಂತೆ ಬಳಸುತಿದ್ದರು. ಈ ಫ್ಲವರ್ ಪಾಟ್ ನ್ನು 'ಚಯರ್ ಪಾಟ್' ಅನ್ನೋಣವೆ?
ಈ ಅಂಗೈನಲ್ಲೂ ಕೂರಬಹುದು!