ಇತ್ತೀಚೆಗೆ ಕಾನ್ಫೆರೆನ್ಸ್ ಪ್ರಯುಕ್ತ ಮೂರು ದಿನಗಳ ಕಾಲ ಮಲೇಶ್ಯಾಕ್ಕೆ ಹೋಗಿದ್ದೆ.
ಅಪ್ಪಟ ಸಸ್ಯಾಹಾರಿಯಾದ ನನಗೆ ಪಂಚತಾರಾ ಹೋಟೆಲ್ ಗಳಲ್ಲಿ ಊಟಕ್ಕಿಂತ ನೋಟವೇ ಚೆನ್ನ. ನನಗೆ ತಕ್ಕುದಾದ ತಿನಿಸುಗಳನ್ನು ಆಯ್ದುಕೊಳ್ಳಲೆಂದು, ಬಫೆಗೆ ಒಂದು ಸುತ್ತು ಹಾಕಿದೆ. ಚೈನೀಸ್, ಮಲೇಶಿಯನ್ ಹಾಗು ಇಂಡಿಯನ್ ಎಂದು ಹೆಸರಿಡಲಾಗಿದ್ದ ತರಾವರಿ ಸಸ್ಯಾಹಾರಿ -ಮಾಂಸಾಹಾರಿ ಭಕ್ಷ್ಯ-ಭೋಜ್ಯಗಳು ಹೀಗಿದ್ದುವು:
'ಎಗ್ ಟಾರಟ್'
ದೀಪಾವಳಿ ಹಬ್ಬ ನೆನಪಾಯಿತೆ? 'ದಿಯಾ ಜಲೇ ಸಾರೇ ರಾತ್ ' ಹಾಡು ಗುನುಗಿದಿರಾ ? ಇದು 'ಎಗ್ ಟಾರ್‍ಟ್' ಎಂಬ ಹೆಸರಿನ ಚೈನೀಸ್ ಸಿಹಿ ತಿಂಡಿ. ಗೋದಿಹಿಟ್ಟು ಹಾಗೂ ಮೊಟ್ಟೆಯಿಂದ ಕೂಡಿದ ಈ ತಿಂಡಿ ಕೇಕ್ ನ ರುಚಿ ಹೊಂದಿದೆ. ಇದು ಚೀನಾದ ಸಾಂಪ್ರದಾಯಿಕ ತಿನಿಸಂತೆ.
ಕೆಂಪಾಗಿ ಕಾಣುವ ಇದು 'ಡ್ರಾಗನ್ ಫ್ರುಟ್'. ಬಿಳಿ ಬಣ್ಣದ ತಿರುಳಿನ ಜತೆಗೆ ಕಪ್ಪು ಬೀಜಗಳನ್ನು ಹೊಂದಿದ್ದು, ಬಾಳೆ ಹಣ್ಣಿನ ಮೇಲೆ 'ಪೆಪ್ಪರ್ ಪುಡಿ' ಚಿಮುಕಿಸಿದಂತೆ ಕಾಣುತ್ತದೆ. ಸ್ವಲ್ಪ ಹುಳಿ ಮಿಶ್ರಿತ ಸಿಹಿ ರುಚಿ ಹೊಂದಿದೆ.
ಆಜ್ಜಿಯ ಎಲೆ-ಅಡಿಕೆ ಕುಟ್ಟಣ ನೆನಪಾಯಿತೆ? ವಿವಿಧ ಮಾಂಸಾಹಾರ ಭಕ್ಷ್ಯಗಳಿವು..
'ಸಾಗೊ ಡೆಸರ್ಟ್',
ಇದು ನಮ್ಮ ಸಬ್ಬಕ್ಕಿ ಪಾಯಸದ ಇನ್ನೊಂದು ರೂಪ. ಸಬ್ಬಕ್ಕಿ ಮತ್ತು ಸ್ವಲ್ಪ ಹೆಸರುಕಾಳುಗಳನ್ನು ಬೇಯಿಸಿ, ಬಾಳೆಹಣ್ಣು, ಹಾಲು, ಸಕ್ಕರೆ ಸೇರಿಸಿ ಪಾಯಸ ಮಾಡಿ, ಸ್ವಲ್ಪ ಕೇಸರಿ ದಳ ಉದುರಿಸಿ, ಫ್ರಿಜ್ಜಲ್ಲಿ ಇಟ್ಟು ತಂಪು ಮಾಡಿದರೆ, ಇದೇ ರುಚಿ ಬರಬಹುದು ಅನಿಸಿತು. ಒಟ್ಟಿನಲ್ಲಿ ಈ 'ಕಲರ್ ಫುಲ್ ಪಾಯಸ' ಚೆನ್ನಾಗಿತ್ತು.
ಸಲಾಡ್ ಗ್ಯಾಲರಿ..
SUPER
ReplyDeleteThanks!
ReplyDeletedid you try preparing "ಸಾಗೊ ಡೆಸರ್ಟ್?"
ReplyDeleteYes, as 'Sankranthi special' payasa!
ReplyDelete