ಸಂಕ್ರಾಂತಿ ಹಬ್ಬ ಕಳೆಯಿತು. ಹಬ್ಬದ ಹಲವಾರು ಆಚರಣೆಗಳಲ್ಲಿ ಗೋ-ಪೂಜೆಯೂ ಒಂದು. ಜನವರಿ ೧೪ ನೇ ತಾರೀಕಿನಂದು ಸಂಕ್ರಾಂತಿ ಹಬ್ಬಕ್ಕೆ ಸಿಂಗಾರಗೊಂಡ ಹಸು ಗಣರಾಜ್ಯೋತ್ಸವ ಹತ್ತಿರ ಬರುತ್ತಿದ್ದರೂ ಇನ್ನೂ ಬಣ್ಣ ಮೆತ್ತಿಕೊಂಡೇ ಇದೆ.
ಬಣ್ಣಬಣ್ಣದ ಬಟ್ಟೆ ತೊಟ್ಟು ಸಂಭ್ರಮಿಸುವ ನಾವು, ಗೋಮಾತೆಗೆ ಬಣ್ಣ ಬಳಿಯುವುದು ಎಷ್ಟು ಸರಿ? ಬಣ್ಣಗಳಲ್ಲಿ ಬಳಸಲಾಗುವ ಸೀಸ, ಕ್ಯಾಡ್ಮಿಯಂ ಇತ್ಯಾದಿಗಳ ಲವಣಗಳು ಚರ್ಮಕ್ಕೆ ಹಾನಿಕಾರಕ. ಮನುಷ್ಯರ ಸಂಭ್ರಮಕ್ಕೆ ಮೂಕ ಪ್ರಾಣಿ ಎಷ್ಟು ಹಿಂಸೆ ಪಡುತ್ತಿದೆಯೋ?