ಮೊನ್ನೆ ಭಾನುವಾರ ಮೈಸೂರಿನ ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಏರಿದೆವು. ಅಲ್ಲಿಂದ ಉತ್ತನಹಳ್ಳಿಯ ಕಡೆಗೆ ಬೆಟ್ಟದ ಮಧ್ಯೆ ಕಾಡಿನ ನಮ್ಮ ನಿಸರ್ಗ ಚಾರಣ. ಉತ್ತನಹಳ್ಳಿಯಲ್ಲಿ 'ತ್ರಿಪುರ ಸುಂದರಿ ಜ್ವಾಲಾಮುಖಿ'ಯ ದೇವಾಲಯವಿದೆ. ಈಕೆ, ಚಾಮುಂಡೇಶ್ವರಿಯ ತಂಗಿ ಎಂಬ ನಂಬಿಕೆ.
ಕುರುಚಲು ಕಾಡಿನ ಈ ಚಾರಣದ ದಾರಿಯುದ್ದಕ್ಕೂ ನಮಗೆ ಕಾಣಸಿಕ್ಕಿದುದು ವಿವಿಧ ಪ್ರಭೇದದ 'ಕಳ್ಳಿ'ಯರು!!! ಕೆಂಪು, ಹಳದಿ ಹೂವಿನಿಂದ ಕಂಗೊಳಿಸುವ ಹೂಗಳ ಜತೆಗೆ ಹಸಿರು-ಕೆಂಪು ಹಣ್ಣುಗಳನ್ನು ಹೊತ್ತಿದ್ದ 'ಕಳ್ಳಿ' ಗಿಡಗಳನ್ನು ಕ್ಯಾ ಮೆರಾದಲ್ಲಿ ಸೆರೆಹಿಡಿದೆವು.
No comments:
Post a Comment