Hema, hemamalab@gmail.com / October 19, 2014
ಇದು ದೆಹಲಿಯಲ್ಲಿರುವ ಲೋಟಸ್ ಟೆಂಪಲ್ – ಕಮಲ ಮಂದಿರ . ಬಹವಾಯಿ ಪಂಥದವರು ಇದರ ಸೃಷ್ಟಿಕರ್ತರು.
ಸರೋವರದ ಮಧ್ಯದಲ್ಲಿ ಕಂಗೊಳಿಸುವ ಕಮಲದ ಆಕಾರದಲ್ಲಿ ಕಟ್ಟಲಾದ ಭವ್ಯ ಧ್ಯಾನಮಂದಿರ. ಸಾರ್ವತ್ರಿಕ ಐಕ್ಯತೆ ಮತ್ತು ಸೌಹಾರ್ದತೆಯನ್ನು ಪ್ರತಿಪಾದಿಸುವ ಈ ಧ್ಯಾನಮಂದಿರದಲ್ಲಿ ಯಾವ ಧರ್ಮದವರೂ ನಿಶ್ಶಬ್ದವಾಗಿ ತಮ್ಮ ನಂಬಿಕೆಯ ದೇವರನ್ನು ಪ್ರಾರ್ಥಿಸಬಹುದು. ಬಹಳ ಸೊಗಸಾದ ಈ ಮಂದಿರವನ್ನು 1986 ರಲ್ಲಿ ಕಟ್ಟಿದರು. ಈ ಮಂದಿರವನ್ನು ಕಟ್ಟಲು 10 ವರ್ಷಗಳ ಕಾಲ 800 ಕ್ಕೂ ಹೆಚ್ಚು ಜನ ದುಡಿದರು. ಒಂಭತ್ತು ಬಾಗಿಲುಗಳನ್ನು ಹೊಂದಿದ ಈ ಕಟ್ಟಡವು ವಿಶಾಲವಾಗಿದ್ದು ಏಕಕಾಲದಲ್ಲಿ ಸಾವಿರಕ್ಕೂ ಹೆಚ್ಚು ಜನ ಪ್ರಾರ್ಥಿಸಬಹುದು.
ಅದ್ಭುತವಾದ ವಾಸ್ತುರಚನೆಯಿಂದಾಗಿ ಮುಖ್ಯ ಪ್ರವಾಸಿ ಆಕರ್ಷಣೆಯಾದ ಈ ಕಟ್ಟಡದ ವಾಸ್ತುಶಿಲ್ಪಿ Fariborz Sahba.
.
- ಹೇಮಮಾಲಾ.ಬಿ
‘
No comments:
Post a Comment