ಹಿತವಾದ ವಾತಾವರಣದಲ್ಲಿ,ಪುಟ್ಟ ಕಾಲುದಾರಿಗಳಲ್ಲಿ, ಅನುಭವಿ ಚಾರಣಿಗರ ಬೆಂಬಲದಲ್ಲಿ, ಹೆಜ್ಜೆ ಹಾಕಿದ ನಮಗೆ ಸಮಯದ ಪರಿವೆಯೂ ಇರಲಿಲ್ಲ, ದಣಿವೂ ಆಗಲಿಲ್ಲ. ಸುಮಾರು ಮೂರು ಗಂಟೆಗಳ ಕಾಲ ಚಾರಣ ನಡೆಸಿ, ಅಲ್ಲೊಂದು ವೀಕ್ಷಣಾ ಗೋಪುರವನ್ನು ತಲಪಿದೆವು. ಆಮೇಲೆ ಬೆಟ್ಟದ ಇನ್ನೊಂದು ಬದಿಯಿಂದ, ಮೆಟ್ಟಿಲುಗಳ ಮೂಲಕ ಕೆಳಗಿಳಿದೆವು.
ಚಾಮುಂಡಿ ಬೆಟ್ಟದ ಸೊಗಸು..
ಅಚ್ಚುಕಟ್ಟಾದ ವ್ಯವಸ್ಥೆ, ಸ್ನೇಹಮಯಿ ಸಹ ಚಾರಣಿಗರು, ರುಚಿಕಟ್ಟಾದ ತಿಂಡಿ-ತಿನಿಸುಗಳು -ಇವಕ್ಕೆಲ್ಲ ಮೇಳೈಸಿದ ಪ್ರಕೃತಿ ಸೌಂದರ್ಯ. ಭಾನುವಾರವನ್ನು ಸಂಪನ್ನಗೊಳಿಸಲು ಇನ್ನೇನು ಬೇಕು ?
No comments:
Post a Comment