ಥೈಲಾಂಡ್ ನ ರಾಜಧಾನಿಯಾದ ಬ್ಯಾಂಕಾಕ್ ಅರಮನೆಯ ಅನತಿ ದೂರದಲ್ಲಿ ಕಂಗೊಳಿಸುತ್ತದೆ, 'ವಾಟ್ ಫೊ' ಎಂದು ಕರೆಯಲ್ಪಡುವ ಬುದ್ಧನ ದೇವಾಲಯ. ಇಲ್ಲಿನ ಬಹುದೊಡ್ಡದಾದ ಹಾಗೂ ಸುಂದರವಾದ ಬುದ್ಧನ ವಿಗ್ರಹವನ್ನು ಮಲಗಿರುವ ಭಂಗಿಯಲ್ಲಿ ಕೆತ್ತಲಾಗಿದೆ.
ವಿಗ್ರಹವು ೪೬ ಮೀಟರ್ ಉದ್ದ ಹಾಗು ೧೫ ಮೀಟರ್ಎತ್ತರವಿದೆಯಂತೆ. ವಿಗ್ರಹಕ್ಕೆ ಸಂಪೂರ್ಣವಾಗಿ ಚಿನ್ನದ ಕವಚವಿದೆ.
ವಿಗ್ರಹವು ೪೬ ಮೀಟರ್ ಉದ್ದ ಹಾಗು ೧೫ ಮೀಟರ್ಎತ್ತರವಿದೆಯಂತೆ. ವಿಗ್ರಹಕ್ಕೆ ಸಂಪೂರ್ಣವಾಗಿ ಚಿನ್ನದ ಕವಚವಿದೆ.
ಥೈಲಾಂಡ್ ನಲ್ಲೆ ಅತಿ ದೊಡ್ಡದಾದ ಈ ದೇವಾಲಯವನ್ನು ೧೭೮೮ ರಲ್ಲಿ ಕಟ್ಟಿ, ಆಮೇಲೆ ದೊರೆ ರಾಮ-೩ ನ ಕಾಲದಲ್ಲಿ ಅಭಿವೃದ್ಧಿಗೊಳಿಸರಂತೆ.
ಇಲ್ಲಿನ ಒಂದು ಕಡೆ ಸಾಲಾಗಿ ಜೋಡಿಸಿರುವ ಪುಟ್ಟ ಪುಟ್ಟ ಹುಂಡಿಗಳಿವೆ. ಅಲ್ಲಿ ಒಬ್ಬರು ಮಹಿಳೆ, ಪುಟ್ಟ ಪುಟ್ಟ ತಟ್ಟೆಗಳಲ್ಲಿ ನಾಣ್ಯಗಳನ್ನು ಸುರುವಿ ಕೊಡುತಿದ್ದರು. ಕೆಲವರು, ಥೈಲಾಂಡ್ ನ ಹಣವಾದ 'ಬಾಟ್'ನ್ನು ಕೊಟ್ಟು, ನಾಣ್ಯಗಳನ್ನು ಪಡೆದುಕೊಂಡು, ಆ ಹುಂಡಿಗಳಿಗೆ ತಲಾ ಒಂದರಂತೆ ನಾಣ್ಯವನ್ನು ಹಾಕುತಿದ್ದರು.
ಇದರ ಉದ್ದೇಶ ಮತ್ತು ಔಚಿತ್ಯ ಏನೆಂದು ಆಕೆಯನ್ನು ಇಂಗ್ಲಿಷ್ ನಲ್ಲಿ ಕೇಳಿದೆ. ಥಾಯಿ ಭಾಷೆಯಲ್ಲಿ ಏನೋ ಅಂದಳು. ನನಗೆ ಅರ್ಥವಾಗಲಿಲ್ಲ. ಗುಂಪಿನಲ್ಲಿ ಗೋವಿಂದ ಎಂದು ನಾನೂ, ಉಳಿದವರನ್ನು ಅನುಸರಿಸಿದೆ.
"ಪವಡಿಸೋ ಪರಮಾತ್ಮ ಶ್ರೀವೆಂಕಟೇಶ.." ಹಾಡನ್ನು ಗುನುಗಿ, ಶ್ರೀರಂಗಪಟ್ಟಣದ "ಮಲಗಿರುವೆಯಾ ರಂಗನಾಥ.." ಹಾಡನ್ನು ಸ್ಮರಿಸಿ, ಮಲಗಿರುವ ಬುದ್ಧನ ಅದ್ಭುತ ರೂಪವನ್ನು ಕಣ್ತುಂಬಿಸಿಕೊಂಡೆ.
No comments:
Post a Comment