ಚಾರಣಪ್ರಿಯರಿಗೆ ಬೆಟ್ಟ ಹತ್ತುವುದು ಒಂದು ಚಟ ಅಥವಾ ವಾರಾಂತ್ಯದ ವಿಶ್ರಾಂತಿಯ ಇನ್ನೊಂದು ರೂಪ. ಜತೆಗೆ ಸ್ನೇಹಿತರೊಡನೆ ಬೆರೆಯುವ ಸದವಕಾಶ, ಹಳೆಯ ಚಾರಣದ ನೆನಪನ್ನು ಮೆಲುಕು ಹಾಕುತ್ತ, ಮುಂದಿನ ಹೊಸ ಚಾರಣದ ಬಗ್ಗೆ ಸಮಾಲೋಚನೆ ಮಾಡುತ್ತಾ, ಕಟ್ಟಿ ತಂದ ಬುತ್ತಿಯನ್ನು ಹಂಚಿ ತಿಂದು, ಪರಸ್ಪರ ಕುಶಾಲ-ಹರಟೆ-ಲೇವಡಿ ಮಾತುಕತೆ ಮಾಡುತ್ತಾ - ಒಟ್ಟಾರೆಯಾಗಿ ಸಂತೋಷವಾಗಿ ದಿನವನ್ನು ಕಳೆಯುವ ಪರಿ.
ಈ ಶ್ರಮಿಕ ಕಾರ್ಮಿಕನಿಗೆ ನಿತ್ಯ ಚಾರಣ ಅನಿವಾರ್ಯ. ಯಾಕೆಂದರೆ ಬೆಟ್ಟ ಹತ್ತಲು ಅನುವು ಮಾಡುವ ಮೆಟ್ಟಿಲು ಕಡಿಯುವುದೇ ಈತನ ಕಾಯಕ. ಕೊರೆಯುವ ಚಳಿಯನ್ನು ಲೆಕ್ಕಿಸದೆ, ಆಗಿಂದಾಗ್ಗೆ ಸುರಿಯುತ್ತಿರುವ ಹಿಮಯನ್ನು ಹಾರೆಯಿಂದ ಹೆರೆದು ಮೆಟ್ಟಿಲುಗಳನ್ನು ಶುಭ್ರಗೊಳಿಸುವ ಈತನ ಕೆಲಸ ನಿಜಕ್ಕೂ ತ್ರಾಸದಾಯಕ. ಹೊಟ್ಟೆಪಾಡು......
ಇದನ್ನು ಕ್ಲಿಕ್ಕಿಸಿದ್ದು ಮನಾಲಿಯ 'ಗುಲಾಬಾ ಸ್ನೋ ಪಾಯಿಂಟ್ ' ನಲ್ಲಿ.
ನಿರಂತರ ಶ್ರಮದಾಯಕ ಕೆಲಸಗಳನ್ನು ನಿರ್ವಹಿಸುವ ಇಂತಹ ಹೀರೋವನ್ನು ಗುರುತಿಸಿದ ನೀವು ಸಹೃದಯರು.
ReplyDeleteನನ್ನ ಬ್ಲಾಗಿಗೂ ಸ್ವಾಗತ.