ಮೈಸೂರಿನಿಂದ ೮೦ ಕಿ.ಮೀ ದೂರದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನವಿದೆ. ಇದು ಸಂರಕ್ಷಿತ ಹುಲಿಧಾಮವೂ ಹೌದು. ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ವನ್ಯಜಗತ್ತಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಆಸಕ್ತರು ಭಾಗವಹಿಸಬಹುದು. ಒಂದು ದಿನದ ಈ ಕಾರ್ಯಕ್ರಮದಲ್ಲಿ ಹುಲಿಯ ಬಗ್ಗೆ ಉಪನ್ಯಾಸ, ಜೀಪಿನಲ್ಲಿ ಕಾಡೊಳಗೆ ಸುತ್ತು ಹಾಕಿ ಪ್ರಾಣಿಗಳ ವೀಕ್ಷಣೆ, ಪರಿಣಿತರ ಮಾರ್ಗದರ್ಶನದೊಂದಿಗೆ ಕಾಡೊಳಗೆ ನಡಿಗೆ ಹಾಗೂ ವನ್ಯಜೀವಿಗಳ ಬಗ್ಗೆ ಸಾಕ್ಶ್ಯಚಿತ್ರ ವೀಕ್ಷಣೆಗೆ ಅವಕಾಶವಿರುತ್ತದೆ. ಮುಂಚಿತವಾಗಿ ಕಾಯ್ದಿರಿಸಿದರೆ ಊಟ-ವಸತಿ ವ್ಯವಸ್ಥೆಯನ್ನೂ ಒದಗಿಸುತ್ತಾರೆ.
ಹೀಗೆ, ಮೊನ್ನೆ ಒಂದು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪರಿಣಿತರ ಜತೆಗೆ ನಡೆಯುತ್ತಿರುವಾಗ ಅವರು ಪರಿಚಯಿಸಿದ 'ನವಿಲಾಡಿ' ಎಂಬ ವಿಶಿಷ್ಟ ಹಾಗೂ ಸೊಗಸಾದ ಹೆಸರು ಹೊತ್ತಿರುವ ಮರ ಇದು. ಈ ಮರದ ಸಸ್ಯಶಾಸ್ತ್ರೀಯ ಹೆಸರು 'ವಿಟೆಕ್ಸ್ ಅಲ್ಟಿಸ್ಸಿಮ'. ಮೂರು ಎಲೆಗಳು ಸೇರಿ ನವಿಲಿನ ಪಾದವನ್ನು ಹೋಲುವ ಸಂಯುಕ್ತ ಎಲೆ ಇರುವುದರಿಂದ ಈ ಪ್ರಭೇದದ ಮರಕ್ಕೆ 'ನವಿಲಾಡಿ' ಎಂಬ ಸೊಗಸಾದ ಕನ್ನಡದ ಹೆಸರಿಟ್ಟಿದ್ದಾರೆ!

ಸುಮಾರು ಮಧ್ಯಮ ಗಾತ್ರಕ್ಕೆ ೨೫-೩೦ ಮೀ ಎತ್ತರಕ್ಕೆ ಬೆಳೆಯುವ ಈ ಮರವು ಔಷಧೀಯ ಗುಣಗಳನ್ನು ಹೊಂದಿದೆ. ಬಲಿತ ಮರವು ಪೀಠೋಪಕರಣಗಳ ತಯಾರಿಗೂ ಬಳಕೆಯಾಗುತ್ತದೆ.
No comments:
Post a Comment