ದುಬಾರಿ ಎನಿಸಿದರೂ ನಾಲಕ್ಕು ಸಿಂಗಾಪುರ್ ಡಾಲರ್ (ಸುಮಾರು ನೂರಿಪ್ಪತ್ತು ರುಪಾಯಿ) ತೆತ್ತು ಒಂದು ಎಳನೀರು ಕೊಂಡು ಕೊಂಡೆ.
ಎಳನೀರನ್ನು ಒಂದು ಪುಟ್ಟ ತಟ್ಟೆಯಲ್ಲಿ ಇರಿಸಿ,ಅದರ ಮೇಲೆ ಸಣ್ಣದಾದ
'ಛತ್ರಿ'ಯನ್ನು ಜೋಡಿಸಿದರು.
ಎಂಥ ಸುಂದರ ಜೋಡಣೆ!
ಪ್ರವಾಸಿಗಳನ್ನು ಸೆಳೆಯುವ ಮಾರ್ಕೆಟಿಂಗ್ ತಂತ್ರ!
ಮೈಸೂರಿನಲ್ಲಿ ಸೈಕಲ್ ಮೇಲೆ ಹೊರಲಾರದಷ್ಟು ಕಾಯಿಗಳನ್ನು ಹೇರಿಕೊಂಡು, ದಾರಿಯುದ್ದಕ್ಕೂ ಕೇಳಿದವರಿಗೆ ಎಳನೀರನ್ನು ಕೊಚ್ಚಿಕೊಟ್ಟು ಅದರ ಚಿಪ್ಪನ್ನು ಅಲ್ಲಲ್ಲೇ ಎಸೆದು ಹೋಗುವವರನ್ನು ನೆನಪಾಯಿತು.
ಯಾವುದೇ ದೇಶದಲ್ಲಿ , ಪ್ರವಾಸೋದ್ಯಮವನ್ನು ಬೆಳೆಸಲು ಸಣ್ಣ ಪುಟ್ಟ ವಿಚಾರಗಳಿಗೂ ಪ್ರಾಮುಖ್ಯತೆ ನೀಡಿದರೆ ಮಾತ್ರ ಸಾಧ್ಯ ಅನಿಸಿತು.
nice article.
ReplyDelete