Total Pageviews

20,106

Tuesday, September 7, 2010

ಸಿಂಗಾಪುರದಲ್ಲಿ ಎಳನೀರು ಹೀಗಿತ್ತು

ಕಳೆದ ಏಪ್ರಿಲ್ ತಿಂಗಳ ಬಿಸಿಲಿನಲ್ಲಿ ಸಿಂಗಾಪುರದ  ಸೆಂಟುಸ  ದ್ವೀಪದಲ್ಲಿದ್ದೆ. ಎಳನೀರು ಮಾರುವ ಗಾಡಿಯೊಂದನ್ನು  ಕಂಡಾಗ ಕೊಳ್ಳೋಣವೆಂದು ಹತ್ತಿರ ಹೋದೆ. ಅಚ್ಚುಕಟ್ಟಾದ ಗಾಡಿಯಲ್ಲಿ,  ಮಂಜುಗಡ್ಡೆಯ ಮಧ್ಯೆ  ಇರಿಸಿದ ಎಳನೀರುಗಳು ಆಕರ್ಷಕವಾಗಿದ್ದುವು.




ದುಬಾರಿ ಎನಿಸಿದರೂ  ನಾಲಕ್ಕು ಸಿಂಗಾಪುರ್  ಡಾಲರ್  (ಸುಮಾರು  ನೂರಿಪ್ಪತ್ತು  ರುಪಾಯಿ) ತೆತ್ತು  ಒಂದು ಎಳನೀರು ಕೊಂಡು ಕೊಂಡೆ. 




ಎಳನೀರನ್ನು ಒಂದು ಪುಟ್ಟ ತಟ್ಟೆಯಲ್ಲಿ ಇರಿಸಿ,ಅದರ ಮೇಲೆ ಸಣ್ಣದಾದ
'ಛತ್ರಿ'ಯನ್ನು ಜೋಡಿಸಿದರು.
ಎಂಥ ಸುಂದರ ಜೋಡಣೆ!
ಪ್ರವಾಸಿಗಳನ್ನು ಸೆಳೆಯುವ ಮಾರ್ಕೆಟಿಂಗ್ ತಂತ್ರ!



 ಮೈಸೂರಿನಲ್ಲಿ  ಸೈಕಲ್ ಮೇಲೆ ಹೊರಲಾರದಷ್ಟು ಕಾಯಿಗಳನ್ನು ಹೇರಿಕೊಂಡು, ದಾರಿಯುದ್ದಕ್ಕೂ ಕೇಳಿದವರಿಗೆ ಎಳನೀರನ್ನು ಕೊಚ್ಚಿಕೊಟ್ಟು ಅದರ ಚಿಪ್ಪನ್ನು ಅಲ್ಲಲ್ಲೇ ಎಸೆದು ಹೋಗುವವರನ್ನು  ನೆನಪಾಯಿತು. 

ಯಾವುದೇ ದೇಶದಲ್ಲಿ , ಪ್ರವಾಸೋದ್ಯಮವನ್ನು ಬೆಳೆಸಲು ಸಣ್ಣ ಪುಟ್ಟ ವಿಚಾರಗಳಿಗೂ  ಪ್ರಾಮುಖ್ಯತೆ ನೀಡಿದರೆ ಮಾತ್ರ ಸಾಧ್ಯ ಅನಿಸಿತು.  

1 comment: